ಸರ್ಕಾರಿ ಜವಾನ ಹುದ್ದೆಗಳ ನೇಮಕಾತಿ:Peon Recruitment 2022 Karnataka
Peon Recruitment 2022 Karnataka: ಕರ್ನಾಟಕದ ಬಳ್ಳಾರಿ ಜಿಲ್ಲಾ ನ್ಯಾಯಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ. ಹುದ್ದೆಯ ವಿವರ, ಸ್ಥಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವು ಕೆಳಗೆ ನೀಡಲಾಗಿದೆ. ಈ ಸುದ್ದಿಯನ್ನು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹಾಗೂ ಪ್ರತೀ ದಿನದ ಉದ್ಯೋಗದ ಸುದ್ದಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
ಸರ್ಕಾರಿ ಜವಾನ ಹುದ್ದೆಗಳ ನೇಮಕಾತಿ:Peon Recruitment 2022 Karnataka
Peon Recruitment 2022 Karnataka ಸರ್ಕಾರಿ ಹುದ್ದೆಗಳು /ಜವಾನ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಈ ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ನೀಡಲಾಗಿದೆ.
ಹುದ್ದೆಯ ಹೆಸರು:
ಜವಾನ (ಪಿಯೋನ್)
ಹುದ್ದೆಗಳ ಸಂಖ್ಯೆ:
ಒಟ್ಟು 33 ಹುದ್ದೆಗಳು ಖಾಲಿ ಇವೆ.
ಉದ್ಯೋಗ ಸ್ಥಳ:
ಬಳ್ಳಾರಿ ಜಿಲ್ಲೆ (ಕರ್ನಾಟಕ)
ವೇತನ:
ಅಭ್ಯರ್ಥಿಗಳಿಗೆ ಮಾಸಿಕ ರೂ.17,000 – 28,950 /- ವೇತನವಾಗಿ ನೀಡಲಾಗುವುದು.
ವಯೋಮಿತಿ:
ಸಾಮಾನ್ಯ ವರ್ಗ – ಕನಿಷ್ಠ 18 & ಗರಿಷ್ಠ 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ – ಕನಿಷ್ಠ 18 & ಗರಿಷ್ಠ 38 ವರ್ಷ
SC/ST/ ಪ್ರವರ್ಗ1 – ಕನಿಷ್ಠ 18 & ಗರಿಷ್ಠ 40 ವರ್ಷ
ವಿದ್ಯಾರ್ಹತೆ:
ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು.
ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು.
ಆಯ್ಕೆ ವಿಧಾನ:
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳಂತೆ (ಸಂಬಂಧಿಸಿದ ಮೀಸಲಾತಿಯನ್ನು ಪರಿಗಣಿಸಿ) ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಸಂದರ್ಶನ ದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. (ಸಂದರ್ಶನವು 10 ಅಂಕಗಳನ್ನು ಒಳಗೊಂಡಿರುತ್ತದೆ.)
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.ಕೆಳಗೆ ನೀಡಲಾಗಿರುವ ಅಧಿಕೃತ ವೆಬ್ಸೈಟ್ ನ ಲಿಂಕ್ ಮುಖಾಂತರ ಭೇಟಿ ನೀಡಿ, ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ವೆಬ್ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗ & ಪ್ರವರ್ಗ 2ಎ, 2ಬಿ, 3ಎ, 3ಬಿ – 200/-
SC/ST/ ಪ್ರವರ್ಗ1/ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.
ಅರ್ಜಿ ಶುಲ್ಕ ಪಾವತಿಸುವ ವಿಧಾನ:
ಅಭ್ಯರ್ಥಿಯು ಆನ್ಲೈನ್/ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬೇಕು ಅಥವಾ,
ಬಳ್ಳಾರಿ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ನಿಂದ ಚಲನ್ ಪ್ರಿಂಟ್ ತೆಗೆದು ,SBI ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಶುಲ್ಕ ಪಾವತಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 27/04/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29/05/2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 31/05/2022
ಹೆಚ್ಚಿನ ಮಾಹಿತಿಗಾಗಿ: ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಪೂರ್ತಿಯಾಗಿ ಓದಿರಿ.Peon Recruitment 2022 Karnataka
ಅರ್ಜಿ ಸಲ್ಲಿಸಿ – ವೆಬ್ಸೈಟ್ ಲಿಂಕ್
Peon Recruitment 2022 Karnataka
EmoticonEmoticon