ಶಿವಮೊಗ್ಗದಲಿ ಇರುವ 98 ಕ್ಲರ್ಕ್, ಅಟೆಂಡರ್, ಡ್ರೈವರ್ ಹುದ್ದೆಗಳ ಭರ್ತಿಗೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಮೇ 16ರ ಮೊದಲು ಅರ್ಜಿ ಹಾಕಬೇಕು.
98 ಹುದ್ದೆಗೆ ಅರ್ಜಿ ಹಾಕಿ
Last Updated:
Shivamogga DCC Bank Recruitment: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (Shivamogga District Cooperative Central Bank Ltd ) ಖಾಲಿ ಇರುವ ಕ್ಲರ್ಕ್, ಅಟೆಂಡರ್, ಡ್ರೈವರ್ (Clerk, Attender, Driver) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮೇ 16ರ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು. ಯಾವುದೇ ಹುದ್ದೆಗೆ ಅರ್ಜಿ ಹಾಕುವ ಮುನ್ನ ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆ, ವೇತನ ಅರ್ಜಿ ಸಲ್ಲಿಸುವ ವಿಧ, ಕೊನೆಯ ದಿನ ಸೇರಿದಂತೆ ಹೆಚ್ಚಿನ ಮಾಹಿತಿ ತಿಳಿಯುವುದು ಬಹಳ ಮುಖ್ಯ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಶಿವಮೊಗ್ಗ ಡಿಸಿಸಿ ಬ್ಯಾಂಕ್)
ಹುದ್ದೆಗಳ ಸಂಖ್ಯೆ 98
ಉದ್ಯೋಗ ಸ್ಥಳ ಶಿವಮೊಗ್ಗ - ಕರ್ನಾಟಕ
ಹುದ್ದೆಯ ಹೆಸರು ಕ್ಲರ್ಕ್, ಅಟೆಂಡರ್, ಡ್ರೈವರ್
ವೇತನ ರೂ.17000-62600/- ಪ್ರತಿ ತಿಂಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 16-05-2022
ಶಿವಮೊಗ್ಗದಲ್ಲಿ ಖಾಲಿ ಇರುವ 98 ಕ್ಲರ್ಕ್, ಅಟೆಂಡರ್, ಡ್ರೈವರ್ ಹುದ್ದೆಗಳ ಭರ್ತಿಗೆ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಮೇ 16ರ ಮೊದಲು ಅರ್ಜಿ ಹಾಕಬೇಕು. ಈ ಹುದ್ದೆಗೆ ಪದವಿ, ಎಸ್ಎಸ್ಎಲ್ಸಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಹಾಕಲು ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.17000-62600/- ವೇತನ ನೀಡಲಾಗುತ್ತದೆ.
ಹುದ್ದೆ ಸಂಖ್ಯೆ ಶೈಕ್ಷಣಿಕ ಅರ್ಹತೆ ವೇತನ
ಖಾಸಗಿ ಸಹಾಯಕ, ಸ್ಟೆನೋಗ್ರಾಫರ್ 1 ಪದವಿ ರೂ.33450-62600/-
ಕಿರಿಯ ಸಹಾಯಕ,ಕ್ಷೇತ್ರ ಕೆಲಸಗಾರ,ನಗದು ಗುಮಾಸ್ತರು 73 ಪದವಿ ರೂ.30350-58250/-
ವಾಹನ ಚಾಲಕರು 1 ಎಸ್ಎಸ್ಎಲ್ಸಿ ರೂ.27650-52650/-
ಅಟೆಂಡರ್ 22 ಎಸ್ಎಸ್ಎಲ್ಸಿ ರೂ.23500-47650/-
ಆಕ್ವರಿಸ್ಟ್ 1 4ನೇ ತರಗತಿ ರೂ.17000-28950/-
ಸಂಸ್ಥೆಯ ಹೆಸರು: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ (ಶಿವಮೊಗ್ಗ ಡಿಸಿಸಿ ಬ್ಯಾಂಕ್)
ಹುದ್ದೆಗಳ ಸಂಖ್ಯೆ: 98
ಉದ್ಯೋಗ ಸ್ಥಳ: ಶಿವಮೊಗ್ಗ - ಕರ್ನಾಟಕ
ಹುದ್ದೆಯ ಹೆಸರು: ಕ್ಲರ್ಕ್, ಅಟೆಂಡರ್, ಡ್ರೈವರ್
ವೇತನ: ರೂ.17000-62600/- ಪ್ರತಿ ತಿಂಗಳು
ಹುದ್ದೆಯ ವಿವರ
ಖಾಸಗಿ ಸಹಾಯಕ,ಸ್ಟೆನೋಗ್ರಾಫರ್ 1
ಜೂನಿಯರ್ ಅಸಿಸ್ಟೆಂಟ್, ಫೀಲ್ಡ್ ವರ್ಕರ್, ನಗದು ಗುಮಾಸ್ತರು 73
ವಾಹನ ಚಾಲಕರು 1
ಅಟೆಂಡರ್ 22
ಆಕ್ವರಿಸ್ಟ್1
ಶೈಕ್ಷಣಿಕ ಅರ್ಹತೆ
ಖಾಸಗಿ ಸಹಾಯಕ,ಸ್ಟೆನೋಗ್ರಾಫರ್: ಪದವ
ಜೂನಿಯರ್ ಅಸಿಸ್ಟೆಂಟ್, ಫೀಲ್ಡ್ ವರ್ಕರ್, ನಗದು ಗುಮಾಸ್ತರು: ಪದವಿ
ವಾಹನ ಚಾಲಕರು: ಎಸ್ಎಸ್ಎಲ್ಸಿ
ಅಟೆಂಡರ್: ಎಸ್ಎಸ್ಎಲ್ಸಿ
ಆಕ್ವರಿಸ್ಟ್: 4ನೇ ತರಗತಿ
ವಯೋಮಿತಿ:
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಮೇ 16 2022 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು.
ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳು: 03 ವರ್ಷಗಳು
SC/ST/Cat-I ಅಭ್ಯರ್ಥಿಗಳು: 05 ವರ್ಷಗಳು
ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ
SC/ST/Cat-I & Ex-Servicemen ಅಭ್ಯರ್ಥಿಗಳು: ರೂ.450/-
ಕ್ಯಾಟ್-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: ರೂ.900/-
ಪಾವತಿ ವಿಧಾನ: ಡಿಮ್ಯಾಂಡ್ ಡ್ರಾಫ್ಟ್
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಪ್ರಾವೀಣ್ಯತೆ ಪರೀಕ್ಷೆ ಮತ್ತು ಸಂದರ್ಶನ
ವೇತನ ವಿವರ
ಖಾಸಗಿ ಸಹಾಯಕ, ಸ್ಟೆನೋಗ್ರಾಫರ್ ರೂ.33450-62600/-
ಕಿರಿಯ ಸಹಾಯಕ,ಕ್ಷೇತ್ರ ಕೆಲಸಗಾರ,ನಗದು ಗುಮಾಸ್ತರು ರೂ.30350-58250/-
ವಾಹನ ಚಾಲಕರು ರೂ.27650-52650/-
ಅಟೆಂಡರ್ ರೂ.23500-47650/-ಆಕ್ವರಿಸ್ಟ್ ರೂ.17000-28950/-
ಇದನ್ನೂ ಓದಿ: South Western Railwayಯಲ್ಲಿ 147 ಹುದ್ದೆಗೆ ಅರ್ಜಿ ಹಾಕಲು ಇಂದು ಕೊನೆಯ ದಿನ - ಇಲ್ಲಿ ಅರ್ಜಿ ಹಾಕಿ
ಅರ್ಜಿ ಸಲ್ಲಿಸುವುದು ಹೇಗೆ?
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಸಿಬ್ಬಂದಿ ನಿಯಂತ್ರಣ ಸಮಿತಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ ಬಾಲರಾಜ್ ಅರಸ್ ರಸ್ತೆ, ಪಿ.ಬಿ.ಸಂ. 62, ಶಿವಮೊಗ್ಗ- 577201 ಗೆ ಕಳುಹಿಸಬೇಕು.
ವೆಬ್ಸೈಟ್: shimogadccbank.com
ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 22-04-2022
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-05-2022
ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 16 ಮೇ
ಅರ್ಜಿ ಕಳುಹಿಸುವ ವಿಳಾಸ
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ- ಸಿಬ್ಬಂದಿ ನಿಯಂತ್ರಣ ಸಮಿತಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಲಿಮಿಟೆಡ್ಬಾಲರಾಜ್ ಅರಸ್ ರಸ್ತೆ, ಪಿ.ಬಿ.ಸಂ. 62,ಶಿವಮೊಗ್ಗ- 577201
EmoticonEmoticon