ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು. ಅರ್ಜಿ ಸಲ್ಲಿಸಲು ಮಾದರಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
2022 ರ ಕರ್ನಾಟಕ ಶಿಕ್ಷಕರ ಅರ್ಹತಾ ( KARTET - 2022 ) ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸೂಚನೆಗಳು
1. ಕೆ.ಎ.ಆರ್.ಟಿ.ಇ.ಟಿ -2022 ಪರೀಕ್ಷೆಗೆ ದಿನಾಂಕ : -01-09-2022ರಿಂದ ಅರ್ಹ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ www.schooleducation.kar.nic.in ರಲ್ಲಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸುವುದು .
2. ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಈ ಕೆಳಕಂಡ ಸೂಚನೆಗಳನ್ನು ತಪ್ಪದೇ ಓದಿಕೊಂಡು ನಂತರ ಭರ್ತಿ ಮಾಡುವುದು .
3. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕಃ 30.09.2022 ಆಗಿರುತ್ತದೆ .
4 . ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಈ ಕಛೇರಿಯ ಸ್ಥಿರ ದೂರವಾಣಿ ಸಂಖ್ಯೆಗಳಾದ 080-22483140 , 080-22228805 , 080-22483145 ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯುವುದು .
5.ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸುವುದು .
6. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಸಮಯದಲ್ಲಿ ವಿದ್ಯುತ್ ಕಡಿತಗೊಂಡಲ್ಲಿ ಅಥವಾ ಇತರೆ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಮತ್ತೆ ಅರ್ಜಿಯನ್ನು ಭರ್ತಿ ಮಾಡುವ ಕಾರ್ಯವನ್ನು ಮುಂದುವರೆಸಲು ಅವಕಾಶ ಕಲ್ಪಿಸಲಾಗಿದೆ .
7 . ಮಾಹಿತಿಗಳು ದೋಷಪೂರಿತ ಹಾಗೂ ತಪ್ಪು ಮಾಹಿತಿಗಳನ್ನು ಒಳಗೊಂಡಿದ್ದಲ್ಲಿ ಅಭ್ಯರ್ಥಿಗಳೇ ಸಂಪೂರ್ಣವಾಗಿ ಜವಾಬ್ದಾರರಾಗಿರುತ್ತಾರೆ .
8. ಅರ್ಜಿ ಶುಲ್ಕ ಪಾವತಿಸಲು ದಿನಾಂಕ : 30-09-2022 ( ಮಧ್ಯ ರಾತ್ರಿ 12 ಗಂಟೆ ) ಕೊನೆಯ ದಿನಾಂಕವಾಗಿದೆ .
9. " ONLINE " od INTERNET BANKING / CREDIT CARD / DEBIT CARD / UPI ಅಥವಾ ಬ್ಯಾಂಕ್ ಚಲನ್ ( ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಬ್ಯಾಂಕಿನಲ್ಲಿ ಮಾತ್ರ ಚಲನ್ ಮೂಲಕ ಶುಲ್ಕ ಪಾವತಿಸುವುದು ) ಮೂಲಕವೇ ಪಾವತಿಸತಕ್ಕದ್ದು .
10. ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿಸುವವರು ಚಲನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ , ಬ್ಯಾಂಕಿನಲ್ಲಿ ಅರ್ಜಿಶುಲ್ಕ ಪಾವತಿಸುವುದು . ಶುಲ್ಕ ಪಾವತಿಸಿದ ನಂತರ ಆನ್‌ಲೈನ್ ಅರ್ಜಿಯಲ್ಲಿ ಚಲನ್ ನಂಬರ್ Challan No. ( ATRN ) ತಂತಾನೆ GENERATE ಆಗುತ್ತದೆ . Challan No. ( ATRN ) ನಂಬರ್ GENERATE ಆಗಲು 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುವುದು . ನಂತರವಷ್ಟೇ ಅರ್ಜಿಯ Printout ತೆಗೆದುಕೊಳ್ಳುವುದು .
11. ಇನ್ಯಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ . INTERNET Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆವಿಗೂ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು .
12. ಅಭ್ಯರ್ಥಿಯು ಅರ್ಜಿ ಶುಲ್ಕ ಪಾವತಿಸಿ , Submit ಮಾಡುವ ಮೊದಲು ತನ್ನ ಅರ್ಜಿಯಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಬಹುದು , ಆದ್ದರಿಂದ ಅಭ್ಯರ್ಥಿಯು ಶುಲ್ಕ ಪಾವತಿಸಿ , Submit ಮಾಡುವ ಮೊದಲು ಅರ್ಜಿಯಲ್ಲಿನ ಮಾಹಿತಿಗಳನ್ನು ಜಾಗರೂಕತೆಯಿಂದ ಓದಿ ಭರ್ತಿಮಾಡಿ , ಸರಿಯಾಗಿ ನಮೂದಿಸಿರುವುದನ್ನು ಖಚಿತಪಡಿಸಿಕೊಂಡು Submit ಮಾಡುವುದು .
13. ಅಭ್ಯರ್ಥಿಯು ಅರ್ಜಿ ಶುಲ್ಕ ಪಾವತಿಸಿ , ಅರ್ಜಿಯನ್ನು ಒಮ್ಮೆ Submit ಮಾಡಿದ ಮೇಲೆ ಯಾವುದೇ ಮಾಹಿತಿಗಳನ್ನು ಭರ್ತಿ ಮಾಡಲು ಅವಕಾಶವಿರುವುದಿಲ್ಲ . ಸ೦ಬ೦ಧ ಯಾವುದೇ ಮನವಿಗಳನ್ನು ಕೇಂದ್ರೀಕೃತ ದಾಖಲಾತಿ ಘಟಕದಲ್ಲಿ ಅಭ್ಯರ್ಥಿಗಳಿಂದ ಸ್ವೀಕರಿಸಲಾಗುವುದಿಲ್ಲ .
ಸೂಚನೆ : ಅಭ್ಯರ್ಥಿಯು ಆನ್‌ಲೈನ್‌ನಲ್ಲಿ ಅರ್ಜಿಶುಲ್ಕ ಪಾವತಿಸುವ ಸಂದರ್ಭದಲ್ಲಿ ಅರ್ಜಿಶುಲ್ಕವು ಅಭ್ಯರ್ಥಿಯ ಉಳಿತಾಯ ಖಾತೆಯಲ್ಲಿ DEBIT ಆಗಿ ಕೇಂದ್ರೀಕೃತ ದಾಖಲಾತಿ ಘಟಕದ ಬ್ಯಾಂಕ್ ಖಾತೆಗೆ ಜಮೆ ಆಗದೆ Transaction Failure ಆದಾಗ ಅರ್ಜಿಯ Printout ಬರುವುದಿಲ್ಲ ಇದಕ್ಕೆ ಈ ಕಛೇರಿಯು ಜವಾಬ್ದಾರಿಯಾಗಿರುವುದಿಲ್ಲ .
14. ಒಮ್ಮೆ ಪಾವತಿಸಿದ ಅರ್ಜಿಯ ಶುಲ್ಕವನ್ನು ಯಾವುದೇ ಕಾರಣಗಳಿಗೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಹೊಂದಾಣಿಕೆ ಮಾಡಲಾಗುವುದಿಲ್ಲ .
15. ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು . ಇದರೊಂದಿಗೆ ಶುಲ್ಕ ವಿನಾಯಿತಿ ಬಯಸಿ ಅರ್ಜಿ ಸಲ್ಲಿಸುವ ವಿಕಲಚೇತನ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ PH Cetificate ನ್ನು ತಪ್ಪದೆ ಸ್ಕ್ಯಾನ್ ( JPEG Format Below 500KB ) ಮಾಡಿ ಅಪ್‌ಲೋಡ್ ಮಾಡಬೇಕು . ಇಲ್ಲದಿದ್ದಲ್ಲಿ ವಿಕಲಚೇತನ ಅಭ್ಯರ್ಥಿ ಎಂದು ಪರಿಗಣಿಸಲಾಗುವುದಿಲ್ಲ .
16. Online ಅರ್ಜಿಯ ಮೂಲಕ ನೀಡಿರುವ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ಪರೀಕ್ಷೆಯನ್ನು ಬರೆಯುವ ಅರ್ಹತೆ , ಪರೀಕ್ಷೆಯ ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷೆಯಲ್ಲಿ ಅರ್ಹತೆ ಗೊಂಡಲ್ಲಿ ಅರ್ಹತಾ ಪ್ರಮಾಣ ಪತ್ರವನ್ನು ನಿರ್ಧರಿಸುವುದರಿಂದ ಯಾವುದೇ ಹಂತದಲ್ಲಿ ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ .
17. Online ಅರ್ಜಿಯಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು , ಅಂಕಣವನ್ನು ಖಾಲಿ ಬಿಟ್ಟಲ್ಲಿ ಸಾಮಾನ್ಯ ವರ್ಗ ಎಂದು ಪರಿಗಣಿಸಲಾಗುವುದು , ನಂತರ ಯಾವುದೇ ಹಂತದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಮಾಹಿತಿಗಳ ಸೇರ್ಪಡೆ ಮತ್ತು ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ .
18. ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಮುಂದಿನ ಉಪಯೋಗಕ್ಕಾಗಿ ಸಂರಕ್ಷಿಸಿ ಇಟ್ಟುಕೊಳ್ಳುವುದು .
19. ಮುದ್ರಿತ ಅರ್ಜಿಯು ಒಂದು ವೇಳೆ ಕಳೆದು ಹೋದಲ್ಲಿ ಮೇಲೆ ತಿಳಿಸಿದ ವೆಬ್‌ಸೈಟ್‌ನಲ್ಲಿ ನಿಮ್ಮ “ User ID and Password ” ಗಳನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದು .
20. ( Calendar of Events ) .
1. ಅರ್ಜಿಯನ್ನು ತುಂಬಲು ನಿಗದಿಪಡಿಸಿದ ದಿನಾಂಕಃ 01.09.2022 ರಿಂದ 30.09.2022 ರವರೆಗೆ
2. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 30.09.2022
3. ನಿಗದಿತ ಶುಲ್ಕ ಪಾವತಿಸಲು ಕೊನೆಯ ದಿನಾಂಕ 30.09.2022
ಅರ್ಜಿ ಫಾರ್ಮ್ ತುಂಬುವ ಮಾಹಿತಿ: Click here
👉 ಟಿಇಟಿ ಪರೀಕ್ಷೆಯ ಅರ್ಜಿ ತುಂಬವ ವಿಧಾನ!
EmoticonEmoticon