Questionnaires asked in the examination on the basic democratic rights of the Constitution

- March 28, 2022

ಮೂಲಭೂತ ಹಕ್ಕುಗಳ 

ಮೇಲೆ ವಿವಿಧ ಸ್ಪರ್ಧಾತ್ಮಕ 

ಪರೀಕ್ಷೆಯಲ್ಲಿ ಕೇಳಿರುವ 

ಪ್ರಶ್ನೋತ್ತರಗಳು.




PSI ಪರೀಕ್ಷೆಗೆ ಉಪಯುಕ್ತವಾದ 

ಪ್ರಶ್ನೋತ್ತರಗಳು.


(KPSC/KSP/FDA/SDA/PC/PSI)


1) ಮೂಲಭೂತ ಹಕ್ಕುಗಳು ಸಂವಿಧಾನದ ಎಷ್ಟನೆ ಭಾಗದಲ್ಲಿ ಕಂಡುಬರುತ್ತವೆ?(TET-2020)
Ans: *ಮೂರನೇ ಭಾಗದಲ್ಲಿ*

2) ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? 
Ans: *ಅಮೆರಿಕ ದೇಶದಿಂದ*

3) ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರು? 
Ans: *ಸರ್ದಾರ್ ವಲ್ಲಭಾಯಿ ಪಟೇಲ್*

4) ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ ಉಪ ಸಮಿತಿ ಅಧ್ಯಕ್ಷರು ಯಾರು? 
Ans: *ಜೆಬಿ ಕೃಪಲಾನಿ*

5) ಭಾರತದ ಸಂವಿಧಾನದಲ್ಲಿ ಸಮಾನತೆಯ ಹಕ್ಕು ಯಾವುದಕ್ಕೆ ಸಂಬಂಧಿಸಿದೆ?(FDA-2015)
Ans: *ಧರ್ಮ, ಜನಾಂಗ. ಜಾತಿ. ಲಿಂಗ. ಜನ್ಮಸ್ಥಳ. ಇತ್ಯಾದಿಗಳ ಮೇಲೆ ತಾರತಮ್ಯ ಮಾಡದಿರುವುದು,* 

6) ಸಂವಿಧಾನದ ಯಾವ ಅನುಚ್ಛೇದ 14 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಕಾರ್ಖಾನೆ ಗಣಿ ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳುವುದು ನಿಷೇಧಿಸುತ್ತದೆ?(FDA-2011)
Ans: *ಅನುಚ್ಛೇದ-24* 

7) ಎಷ್ಟನೇ ತಿದ್ದುಪಡಿ ಕಾಯ್ದೆಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಸುವ 21(A) ವಿಧಿಯನ್ನು ಭಾರತ ಸಂವಿಧಾನದಲ್ಲಿ ಅಳವಡಿಸಿತ್ತು? (FDA-2008)
Ans: *86ನೇ ತಿದ್ದುಪಡಿ*

8) ಭಾರತೀಯ ಸಂವಿಧಾನದ ಪ್ರಕಾರ ಯಾವ ಹಕ್ಕು ಮೂಲಭೂತ ಹಕ್ಕಾಗಿ ಇರುವುದಿಲ್ಲ?(FDA-2011)
Ans: *ಕೆಲಸ ಮಾಡುವ ಹಕ್ಕು*

9) ಸಂವಿಧಾನದ 19(1)(D) ವಿಧಿಯು ಖಾತ್ರಿಪಡಿಸಿದ ಸ್ವಾತಂತ್ರ್ಯವು?(FDA-2008)
Ans: *ದೇಶದಾದ್ಯಂತ ಸಂಚರಿಸುವ ಸ್ವಾತಂತ್ರ್ಯ*

10) ಯಾವುದು ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕಾಗಿ ಉಳಿದಿಲ್ಲ?(FDA-2008)
Ans: *ಆಸ್ತಿಯ ಹಕ್ಕು*

11) ಭಾರತದ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡುವುದು?(FDA-2008)
Ans: *12 ರಿಂದ 35ರ ತನಕ ಅನುಚ್ಛೇದಗಳು*

12) ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಅಥವಾ ಆಜ್ಞೆಯನ್ನು ಹೊರಡಿಸಲಾಗುತ್ತದೆ?(FDA-2008)
Ans: *ಬಂಧಿ ಪ್ರತ್ಯಕ್ಷೀಕರಣ*

13) ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿವಾರಣೆ ಯನ್ನು ಒಳಗೊಂಡಿದೆ?(FDA-2008)
Ans: *ಸಮಾನತೆ ಹಕ್ಕು* 

14) ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವಂತೆ ಮಾಡಲು ರಿಟ್ ಅಥವಾ ಆಜ್ಞೆಯನ್ನು ಇವರು ಹೊರಡಿಸಬಹುದು?(FDA-2008)
Ans: *ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯ* 

15) ಯಾವ ಸಮಾನತೆಯನ್ನು ಭಾರತ ಸಂವಿಧಾನ ಎತ್ತಿಹಿಡಿದ ಇಲ್ಲ?(FDA-2005)
Ans: *ಎಲ್ಲರಿಗೂ ಸಮಾನವಾದ ಶೈಕ್ಷಣಿಕ ಅವಕಾಶ*

16) ಹೇಬಿಯಸ್ ಕಾರ್ಪಸ್ ನ ರಿಟ್ ಜಾರಿಯಾಗುವುದು ಎಂದರೆ?(FDA-2018)
Ans: *ಒಬ್ಬ ವ್ಯಕ್ತಿಯು ಮತ್ತೊಬ್ಬ ವ್ಯಕ್ತಿಯನ್ನು ಬಂಧನದಲ್ಲಿರಿಸಿದ್ದಾಗ, ಆ ವ್ಯಕ್ತಿಯನ್ನು ನಾಯಲಯದ ಮುಂದೆ ಹಾಜರುಪಡಿಸಲು ಮತ್ತು ಅಂತಹ ಬಂಧನ ಕೈಗೊಳ್ಳಲು ಇದ್ದ ಅಧಿಕಾರದ ಬಗ್ಗೆ ತೋರಿಸುವಂತೆ ಆದೇಶದ ರೂಪದಲ್ಲಿ ಕರೆ ನೀಡುವುದು*

17) ವಿಧಿ 29 ಮತ್ತು 30 ರಲ್ಲಿ ಖಾತ್ರಿಪಡಿಸಲಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಯಾವುದು ತಾತ್ಪರ್ಯವಾಗಿದೆ?(FDA-20018)
Ans: *ರಾಜ್ಯಭಾಷಾ ಬೋಧನೆಯನ್ನು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯು ಕೈಗೊಳ್ಳುವಂತೆ ರಾಜ್ಯವು ಕಾನೂನಿನ ಮೂಲಕ ಅಗತ್ಯ ಪಡಿಸಿದಾಗ*

18) ಭಾರತದ ಸಂವಿಧಾನದಲ್ಲಿ ಯಾವುದು ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯವನ್ನು ಕಾಯ್ದೆಯ ಸರಿಯಾದ ವಿಧಾನವಲ್ಲದೇ ಕಸಿದುಕೊಳ್ಳು ವಂತಿಲ್ಲ ಎಂದು ಹೇಳುತ್ತದೆ, ಯಾವ ಅನುಚ್ಛೇದ ಈ ಕುರಿತು ವಿವರಿಸುತ್ತದೆ?(FDA-2018)
Ans: *21ನೇ ಅನುಚೇದ*

19) ಭಾರತ ಸಂವಿಧಾನದ ಯಾವ ವಿಧಿ ಅಸ್ಪೃಶ್ಯತೆಯನ್ನು ತೆಗೆದುಹಾಕಿದೆ?(FDA-2019/PC-2020)
Ans: *17 ನೇ ವಿಧಿ* 

20) ಮೂಲಭೂತ ಹಕ್ಕುಗಳನ್ನು ಯಾವುದು ಸಂರಕ್ಷಿಸುತ್ತದೆ?(FDA-2019)
Ans: *ನ್ಯಾಯಾಂಗ/ ಸುಪ್ರೀಂಕೋರ್ಟ್ *

21) ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ಒಬ್ಬ ವ್ಯಕ್ತಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಲ್ಲಿ ನೇರವಾಗಿ ಸರ್ವೋಚ್ಚ ನ್ಯಾಯಾಲಕ್ಕೆ ಮೊರೆ ಹೋಗಬಹುದು?(PSI-2019)
Ans: *32ನೇ ವಿಧಿ*

22) ಸಂವಿಧಾನದಲ್ಲಿ ಶಿಕ್ಷಣದ ಹಕ್ಕನ್ನು ಹೊಸ ಆರ್ಟಿಕಲ್ 21(A) ಇದನ್ನು ಸೇರಿಸಿದ ತಿದ್ದುಪಡಿ ಯಾವುದು?(PSI-2019)
Ans: *86ನೇ ತಿದ್ದುಪಡಿ*

23) ಯಾವ ರಿಟ್ ಅಕ್ಷರಶಃ ನಾವು ಆದೇಶಸುತ್ತೇವೆ ಎಂದು ಅರ್ಥ ಕೊಡುತ್ತದೆ?(PSI-2019)
Ans: *ಮ್ಯಾಂಡಮಸ್* 

24) ಯಾವುದು ಕೋರ್ಟುಗಳಲ್ಲಿ ನ್ಯಾಯ ವಾದದ್ದು?(PSI-2019)
Ans: *ಮೂಲಭೂತ ಹಕ್ಕುಗಳು*

25) ಯಾವ ರಿಟ್ ಅರ್ಜಿಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದೇ?( wireless PSI-2018)
Ans: *ಹೇಬಿಯಸ್ ಕಾರ್ಪಸ್*

26) ಸಂವಿಧಾನಿಕ ಪರಿಹಾರಗಳ ಹಕ್ಕು ಇದರ ಅಡಿಯಲ್ಲಿ ಬರುತ್ತದೆ? (detective-PSI-2018)
Ans: *ಮೂಲಭೂತ ಹಕ್ಕುಗಳು*

27) ಭಾರತೀಯ ಸಂವಿಧಾನದಿಂದ ಖಾತರಿಗೊಂಡ ಯಾವ ಮೂಲಭೂತ ಹಕ್ಕಿನ ಕಾರಣದಿಂದಾಗಿ ಅನುದಾನರಹಿತ ಅಲ್ಪಸಂಖ್ಯಾತ ಸಂಸ್ಥೆಗಳು ಶಿಕ್ಷಣ ಹಕ್ಕು ಕಾಯ್ದೆ(RTE) ಪರಿಮಿತಿಯಿಂದ ಹೊರಗುಳಿದಿದೆ?( intelligence-PSI-2018)
Ans: *30(1)ನೇ ವಿಧಿ*

28) ಅಂಬೇಡ್ಕರ್ ಅವರು ಯಾವ ವಿಧಿಯನ್ನು ಸಂವಿಧಾನದ ಆತ್ಮ ಅಥವಾ ಹೃದಯ ಎಂದು ವರ್ಣಿಸಿದ್ದಾರೆ? (PSI-2020)
Ans: *32 ನೇ ವಿಧಿ*( ಸಂವಿಧಾನಾತ್ಮಕ ಪರಿಹಾರ ಹಕ್ಕು)

29) ಅಸ್ಪೃಶ್ಯತೆಯನ್ನು ಕುರಿತು ಹೇಳುವ ಮೂಲಭೂತ ಹಕ್ಕು ಯಾವುದು?(RSI-2017)
Ans: *ಸಮಾನತೆ ಹಕ್ಕು*



EmoticonEmoticon

 

Start typing and press Enter to search