Brief information on the major dynasties of Karnataka

- March 21, 2022

ಕರ್ನಾಟಕವನ್ನಾಳಿದ ಪ್ರಮುಖ

ರಾಜಮನೆತನಗಳು ಸಂಕ್ಷಿಪ್ತ 

ಮಾಹಿತಿ.



ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಉಪಯುಕ್ತವಿರುವ ಅಂಶಗಳನ್ನು ಮಾತ್ರ ಒಳಗೊಂಡಂತೆ ನೀಡಿರುವ ಕರ್ನಾಟಕವನ್ನಾಳಿದ ಪ್ರಮುಖ ರಾಜ್ಯ ವಂಶಕ್ಕೆ ಸಂಬಂಧಿಸಿದ ಸ್ಪರ್ಧಾರ್ಥಿಗಳು ತಿಳಿಯಲೇಬೇಕಾದ ಅಂತಹ ಮುಖ್ಯ ಮಾಹಿತಿ.

The following are the major households in Karnataka, which are the most frequently asked questions pertaining to the history of all competitive examinations.

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು ಸಂಕ್ಷಿಪ್ತ ಮಾಹಿತಿ 

1)ಮೌರ್ಯರು

➤ ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ. ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.

➤ ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

➤ ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು : ಸುವರ್ಣಗಿರಿ, ಇಸಿಲ, ತೊಸಿಲ, ಸಂಪ.

➤ ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :

➤ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಅ.ಸಿದ್ದಾಪುರ, ಜಿ.ರಾಮೇಶ್ವರ.

➤ ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ, ಪಾಲ್ಕಿಗುಂಡು, ಕೊಪ್ಪಳ.

➤ ಗುಲ್ಬರ್ಗಾ ಜಿಲ್ಲೆಯ ಸನ್ನತಿ

➤ ಬಳ್ಳಾರಿ ಜಿಲ್ಲೆಯ ನಿಟ್ಟೂರು, ಉದೇಗೊಳ್ಳಂ


2)ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225)

➤ ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ, (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.

➤ ಇವರ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.

➤ ಇವರ ಲಾಂಛನ : ವರುಣ.

➤ ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.

➤ ಶಾತವಾಹನರ ಮೂಲ ಪುರುಷ : ಸಿಮುಖ.

➤ ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ

➤ ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ


3) ಬನವಾಸಿಯ ಕದಂಬರು (ಕ್ರಿ.ಶ 345 - 540)

➤ ಈ ಸಂತತಿಯ ಸ್ಥಾಪಕ :ಮಯೂರವರ್ಮ (ಮಯೂರಶರ್ಮ) (345-360)

➤ ಕದಂಬರ ರಾಜಧಾನಿ : ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)

➤ ಬನವಾಸಿಗೆ ವನವಾಸಿ, ವೈಜಯಂತಿ, ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.

➤ ಇವರ ಲಾಂಛನ : ಸಿಂಹ.

➤ ಕದಂಬರಲ್ಲಿ ಹಾನಗಲ್, ಚಂದಾವರ, ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.

➤ ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.

➤ ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.


4) ತಲಕಾಡಿನ ಗಂಗರು (ಕ್ರಿ.ಶ 350- 999)

➤ ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.

➤ ಈ ಸಂತತಿಯ ಮೊದಲ ದೊರೆ : ದಡಿಗ (350 -400)

➤ ಇವರ ಮೊದಲ ರಾಜಧಾನಿ : ಕೋಲಾರ ಬಳಿಯ ಕುವಲಾಲ

➤ ಇವರ ಎರಡನೆಯ ರಾಜಧಾನಿ : ತಲಕಾಡು

➤ ತಲಕಾಡಿನ ಮತ್ತೊಂದು ಹೆಸರು : ತಲವನಪುರ.

➤ ಇವರ ಮೂರನೇ ರಾಜಧಾನಿ : ಚೆನ್ನಪಟ್ಟಣ ಬಳಿಯ ಮಾಕುಂದ

➤ ಇವರ ಲಾಂಛನ : ಆನೆ(ಮದಗಜ)

➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ದುರ್ವಿನೀತ (540-600)

➤ ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.

➤ ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.


5)ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757)

➤ ಈ ಸಂತತಿಯ ಸ್ಥಾಪಕ : ಜಯಸಿಂಹ

➤ ಇವರ ರಾಜಧಾನಿ : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)

➤ ಈ ಸಂತತಿಯ ಅತ್ಯಂತ ಪ್ರಸಿದ್ಧ ದೊರೆ : ಇಮ್ಮಡಿ ಪುಲಕೇಶಿ (609-642)

➤ ಇವರ ರಾಜ ಲಾಂಛನ : ವರಹ.

➤ ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ : ಚೀನಾದ ಬೌದ್ಧ ಯಾತ್ರಿಕ ಹ್ಯೂಯನ್ ತ್ಸಾಂಗ್.

➤ ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.


6) ಮಾನ್ಯಖೇಟದ ರಾಷ್ಟ್ರಕೂಟರು (ಕ್ರಿ.ಶ 345 - 540)

➤ ಈ ಸಂತತಿಯ ಸ್ಥಾಪಕ : ದಂತಿದುರ್ಗ

➤ ಇವರ ರಾಜಧಾನಿ : ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.

➤ ಇವರ ಲಾಂಛನ : ಗರುಡ

➤ ಈ ಸಂತತಿಯ ಅತ್ಯಂತ ಹೆಸರಾಂತ ದೊರೆ :ಅಮೋಘವರ್ಷ ನೃಪತುಂಗ (814-878)

➤ ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.



EmoticonEmoticon

 

Start typing and press Enter to search